Language Settings
Select Website Language
Uttirn
uttirn

ಭಾರತೀಯ ನೌಕಪಡೆ(Navy)ಯ ನೂತನ ಸಾರಥಿ

2 hours ago

News : ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ಬೆಂಗಳೂರಿನ ಬಸವನಗುಡಿಯ ಎನ್‌ಆರ್ ಕಾಲೋನಿಯಲ್ಲಿ ಬೆಳೆದ ವೈಸ್‌ ಅಡ್ಮಿ ರಲ್‌ ಕೃಷ್ಣ ಸ್ವಾಮಿನಾಥನ್‌ ದಿನಾಂಕ 31/05/2026ರಂದು ಅಧಿಕಾರ ಸ್ವೀಕರಿಸಲಿದ್ದಾರೆ.

ಅಡ್ಮಿರಲ್‌ ದಿನೇಶ್‌ ಕುಮಾರ್‌ ತ್ರಿಪಾಠಿ ಅಧಿಕಾರಾವಧಿ ಮುಗಿದ ಹಿನ್ನೆಲೆಯಲ್ಲಿ, ಸ್ವಾಮಿನಾಥನ್‌ ಹೊಸ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ.

ಇವರು 2028ರ ಡಿ.31ರವರೆಗೆ ಅವರ ಅವಧಿ ಇರಲಿದೆ.

ಕೃಷ್ಣ ಸ್ವಾಮಿನಾಥನ್: 

ಬಸವನಗುಡಿಯ ಎನ್‌ಆರ್ ಕಾಲೋನಿಯಲ್ಲಿ ಬೆಳೆದ ಸ್ವಾಮಿನಾಥನ್‌, ಬಿಷಪ್ ಕಾಟನ್ ಶಾಲೆಯಲ್ಲಿ ಶಿಕ್ಷಣ ಪಡೆದರು. ನಂತರ ವಿಜಯಪುರದ ಸೈನಿಕ ಶಾಲೆಯಲ್ಲಿ ಸೇನಾ ಶಿಕ್ಷಣ ಪೂರೈಸಿದರು.

  • ಮೊದಲ ಪ್ರಯತ್ನದಲ್ಲೇ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಪ್ರವೇಶ ಪರೀಕ್ಷೆ ಪಾಸ್ ಮಾಡಿ, 1987ರಲ್ಲಿ 19ನೇ ವಯಸ್ಸಿನಲ್ಲೇ ಭಾರತೀಯ ನೌಕಾಪಡೆಗೆ ನೇಮಕಗೊಂಡರು.

ಸದ್ಯ ಪಶ್ಚಿಮ ನೌಕಾ ಕಮಾಂಡ್‌ನ ಫ್ಲ್ಯಾಗ್ ಆಫಿಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಸೇವೆ ಸಲ್ಲಿಸುತ್ತಿದ್ದ ಅವರು, ಐಎನ್‌ಎಸ್ ವಿಕ್ರಮಾದಿತ್ಯದ ಕಮಾಂಡರ್ ಆಗಿ, ನೌಕಾಪಡೆಯ ಉಪಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (CDS) : 

News : ಭಾರತೀಯ ಸಶಸ್ತ್ರ ಪಡೆಗಳ ಅತ್ಯುನ್ನತ ಹುದ್ದೆಯಾದ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (CDS) ಆಗಿ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಎನ್ಎಸ್ ರಾಜಾ ಸುಬ್ರಮಣಿ (Lt Gen NS Raja Subramani)  ಕೇಂದ್ರ ಸರ್ಕಾರ ನೇಮಕ ಮಾಡಿದೆ.

ಲೆಫ್ಟಿನೆಂಟ್ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅವರು ಪ್ರಸ್ತುತ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಮಿಲಿಟರಿ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2025 ಸೆಪ್ಟೆಂಬರ್ 1 ರಂದು ಅವರು ಈ ಜವಾಬ್ದಾರಿ ವಹಿಸಿಕೊಂಡಿದ್ದರು. 

  • ಜುಲೈ 2024 ರಿಂದ ಜುಲೈ 2025 ರವರೆಗೆ ಭೂಸೇನೆಯ ಉಪಮುಖ್ಯಸ್ಥರಾಗಿ (Vice Chief of Army Staff) ಕಾರ್ಯನಿರ್ವಹಿಸಿದ್ದರು.
  • ಮಾರ್ಚ್ 2023 ರಿಂದ ಜೂನ್ 2024 ರವರೆಗೆ ಸೆಂಟ್ರಲ್ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿಯೂ ಕಾರ್ಯನಿರ್ವಹಿಸಿದ ದಕ್ಷ ಅಧಿಕಾರಿಯಾಗಿದ್ದಾರೆ.
  • ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಸಮನ್ವಯ ತರುವ ಮತ್ತು ಮೂರೂ ಸೇನಾ ಪಡೆಗಳನ್ನು (ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆ) ಏಕೀಕೃತಗೊಳಿಸುವ ಉದ್ದೇಶದಿಂದ ರಚಿಸಲಾದ ಸಿಡಿಎಸ್ ಹುದ್ದೆಗೆ ರಾಜಾ ಸುಬ್ರಮಣಿ ಅವರ ಆಯ್ಕೆಯು ವ್ಯೂಹಾತ್ಮಕವಾಗಿ ಬಹಳ ಮಹತ್ವದ್ದಾಗಿದೆ.
  • ಇವರು ಜನರಲ್ ಬಿಪಿನ್ ರಾವತ್ ಮತ್ತು ಜನರಲ್ ಅನಿಲ್ ಚೌಹಾಣ್ ಅವರ ನಂತರ ಈ ಹುದ್ದೆ ಅಲಂಕರಿಸುತ್ತಿರುವ ಮೂರನೇ ಅಧಿಕಾರಿಯಾಗಿದ್ದಾರೆ.
Click here to Read More
Previous Article
Logistics Port Performance Index

Related ಪ್ರಚಲಿತ ಘಟನೆಗಳು Updates:

Are you sure? You want to delete this comment..! Remove Cancel

Comments (0)

    Leave a comment